Wednesday, January 26, 2011

ಈ ಅಣ್ಣ ನನ್ನ Cot ಅಲ್ಲಿ ಇದ್ದಿದ್ದು ಗೊತ್ತ .... !!!

ಮುಂದುವರಿದ ಭಾಗ....

ಎಲ್ಲ ಕಾರ್ಯಕ್ರಮಗಳ ನಡುವೆ ಒಂದೊದು ಗೇಮ್ಸ್, ನಾವು mentors ಆಗಿದ್ದರುನು ಅವರ ಜೊತೆ ಸೇರಿ ನಾವು ಮಕ್ಕಳಾಗಿದ್ವಿ,ಏನೋಪ್ಪ ಹುಡುಗ್ರು ಇಸ್ಟೊಂದು ಶಾರ್ಪ್ ಮತ್ತೆ active ಆಗಿದಾರೆ ಅನ್ನಿಸ್ತು, ನನ್ನ ಟೀಂ ಅಲ್ಲಿದ್ದ ಒಬ್ಬ ಹುಡಗ ತಮಾಷೆಯಾಗಿ ಬಂದು ಒಂದು ಪ್ರಶ್ನೆ ಕೇಳಿದ " ಅಣ್ಣ Fly HIGH ಅಂದ್ರೆ, ಹೆಗಣ್ಣ? ಭೂಮಿ ಮೇಲೆ ಏನೇ ಮೇಲೆ ಹೋದರು ಕೆಳಗೆ ಬರಬೇಕಲ್ಲ"  ನಾನು ಹೇಗಪ್ಪ ಅಂದೇ ಅದಕ್ಕೆ ಆವನು ಮತ್ತೆ "Gravitational Force, ಗುರುತ್ವಾಕರ್ಷಣೆ ಬಲಕ್ಕೆ ಎಲ್ಲ ಕೆಳಗೆ ಬರಲೇ ಬೇಕಲ್ಲ" ಅಂದ ನಗುತ್ತ, ನಾನು ಅನ್ಕೊಂಡೆ ಹುಡುಗ್ರು ಥಿಂಕ್ ಔಟ್ ಆಫ್ ದಿ ಬಾಕ್ಸ್ ಅಂದ್ರೆ ಇಸ್ಟೊಂದ ಯೋಚನೆ ಮಾಡೋದು ಅಂತ...ಅವನಿಗೆ ಏನಪ್ಪಾ ಉತ್ತರ ಹೇಳೋದು ಅಂತ ನಂ ತಲೆ ಕೆಡ್ಸ್ಕೋ ಬೇಕಾದರೆ ಹೊಳೆದ್ದದ್ದು  ನಮ್ಮ 11 ನೆ ತರಗತಿಯ ಇಂಗ್ಲಿಷ್ ಪಾಟ "Escape velocity" [It is the speed needed to "break free" from a gravitational field without further propulsion], ಅವನಿಗೆ ಹೇಳಿದೆ Escape velocity ಇಟ್ಕೊಂಡು ಹಾರಿ, ಡಿರೆಕ್ಟಾಗಿ ಸ್ಟಾರ್ಸ್ ನ ಮೇಲೋಗಿ ಸೇರ್ತಿರ ಅಂತ ಹೇಳಿ ಸಮಾದಾನ ಮಾಡಿದೆ ... ಅವನಿಗೂ ಖುಷಿ ಆಯಿತು  ಅನ್ಸತ್ತೆ  ಅಣ್ಣಂಗೆ  ಇಂತ  ಕಷ್ಟದ ಪ್ರಶ್ನೆ ಕೇಳಿದ್ರೆ , ಉತ್ತರ  ಹುಡುಕಿ  ಬಿಟ್ರಲ್ಲ , ಹೀಗೂ  ಉಂಟೆ  ಅಂತ !!!

ನಾನು ಹಾಗು ಯೆಶವಂತ್ ಸ್ವಲ್ಪ ಬಿಡುವು ಮಾಡಿಕೊಂಡು ನಮ್ಮ ಕ್ಲಾಸ್ ನೋಡಲು ಹೊರಟೆವು, ನಮ್ಮ ೧೨ ನೆ ತರಗತಿಯ ಕ್ಲಾಸ್ ರೂಂ ನೋಡಿ ಫುಲ್ ಖುಷಿ ಆಯಿತು,  ಅದೇ ಬೋರ್ಡು, ಅದೇ ಡೆಸ್ಕು, ಅದೇ ಗೋಡೆ ಮೇಲೆ ಅಂಟಿಸಿದ್ದ Periodic ಟೇಬಲ್, ಡೆಸ್ಕ್ ತುಂಬೆಲ್ಲ ಪುಸ್ತಕಗಳು...etc etc ನಾನಿಲ್ಲಿ ಕುರ್ತಾ ಇದ್ದಿದ್ದು ಅಂತ ಫೋಟೋ ನು ತೆಗುಸಿಕೊಂಡೆ, ಹುಮ್ಮ್ ...!!! ಏನೋ ಒಂತರ ಖುಷಿ ಆಗ್ತಾ ಇತ್ತು Explain ಮಾಡೋಕಾಗಲ್ಲ ಯಾಕೆ ಅಂದ್ರೆ ನೀವು you should Experience that ....ಮತ್ತೆ ಸ್ಕೂಲಿಗೆ ಸೇರಿದಿನೇನೋ ಅಂತ ಅನಿಸ್ತ ಇತ್ತು.ಮತ್ತೆ ನಮ್ಮ ಕ್ಲಾಸಿನ ಫ್ರೆಂಡ್ಸ್ ಎಲ್ಲರು ನೆನಪಾದ್ರು.

ಅಲ್ಲಿಂದ ಮತ್ತೆ MP ಹಾಲ್ ಗೆ ಬರಬೇಕು... ಓಹ್ ಮತ್ತೆ ಅದೇ ಹುಡುಗ..!!! ಹೋ ಮರೆತೇ ಬಿಟ್ಟೆ ಈ ಹುಡುಗನ ಬಗ್ಗೆ ಹೇಳಿಲ್ಲ ಅಲ್ಲ... ಹಮ್, ನಾನು  ಹಾಸ್ಟೆಲ್ ನೋಡುವ ಸಲುವಾಗಿ ಪ್ರವೀಣ, ವರುಣ್ ರೆಡ್ಡಿ, ಪ್ರಿಯತನ್ ಜೊತೆ ಹೊರಟಿದ್ದೆ, ವಿಂದ್ಯ ಹೌಸ್ (ಈಗಿನ ಸಿವಾಲಿಕ್) ನಾನು ೧೦ ನೆ ತರಗತಿಯಲ್ಲಿದ್ದಾಗ ಇದ್ದದ್ದು ಇಲ್ಲಿಯೇ. ನನ್ನ ಹಳೆಯ cot ನೋಡಿ ಫುಲ್ ಕುಶಿಯಾಗಿತ್ತು cot ಮೇಲೆ ಕೂತಿದ್ದ ಈ ಹುಡುಗನಿಗೆ ಹೇಳಿದೆ "ಹೇಯ್ ಪುಟ್ಟ ನಾನು ಇದೆ ಕಾಟ್ ಅಲ್ಲಿ ಇದ್ದಿದ್ದು ಕಣೋ ಅಂತ... " ಅದನ್ನ ಕೇಳಿದ ಅವ್ನು ನನಗಿಂತ ಖುಷಿ ಆಗಿದ್ದ..!  "ಅಣ್ಣ ನಿಜವಾಗ್ಲೂ ನೀವು ಇದೆ ಕಾಟ್ ಅಲ್ಲಿ ಇದ್ರಾ? ಅವಾಗ ಹೇಗಿತ್ತಣ್ಣ? ನಿಮ್ಮ ಹೆಸರೆನಣ್ಣ? ಯಾವುರಣ್ಣ? ಎಲ್ಲಿದಿರ ಇವಾಗ ? ಏನ್ ಮಾಡ್ತಾ ಇದ್ದೀರಾ? "  ಅವನ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳಿ ಬರೋಸ್ಟರಲ್ಲಿ ಸುಸ್ತಾಗಿದ್ದೆ. ಇನ್ನೇನು ಹಾಸ್ಟೆಲ್ ನೋಡಿ ಹೊರಗೆ ಬಂದು MP ಹಾಲ್ ಕಡೆ ಹೊರಟಿದ್ದೆ... ಆ ಹುಡುಗ ಆಗಲೇ ಹಿಂದೆ ಬಂದಾಗಿತ್ತು !!! ನನ್ನ ಜೊತೆ ಬರುವಾಗ ದಾರಿಯಲ್ಲಿ ಬರುತ್ತಿದ್ದ ಅವನ ಸ್ನೇಹಿತರಿಗೆಲ್ಲ ನನ್ನ ಪರಿಚಯ ಮಾಡಿ ಕೊಡುತ್ತಿದ್ದ... " ನೋಡ್ರೋ ಈ ಅಣ್ಣ ನನ್ ಕಾಟ್ ಅಲ್ಲಿ ಇದ್ದಿದ್ದು ಗೊತ್ತ " ಅಂತ ಸಿಕ್ಕ್ದೊರಿಗೆಲ್ಲ ಹೇಳ್ಕೊಂಡ್ ಬಂದ, ನನಗೇನೋ ಸೆಲೆಬ್ರಿಟಿ value ಬಂದಂತಿತ್ತು :) ಆ ಹುಡುಗನಿಗೆ ಏನ್ ಖುಷಿ ಆಗಿತ್ತೋ ಗೊತ್ತಿಲ್ಲ..!!! ಮತ್ತಿವಾಗ ಅದೇ ಹುಡುಗ ಇನ್ನು ೫ ಜನ ಹುಡುಗರ ಜೊತೆ, ನನ್ನ ತೋರ್ಸೋಕೆ ಕರ್ಕೊಂಡ್ ಬಂದಿದ್ದ... ನಾನ್ ಆಟೋಗ್ರಾಫ್ ಹಾಕೋದು ಒಂದೇ ಬಾಕಿ ಆಗಿತ್ತು ... :)

ಮತ್ತೆ MP ಹಾಲ್ ಗೆ ಬಂದ್ವಿ, ಎಲ್ಲ ಕಾರ್ಯಕ್ರಮಗಳು ಚೆನ್ನಾಗಿತ್ತು, team building, creativity, confidence, motivation... ಒಂದೊಂದು  ಗೇಮ್ ಒಂದೊಂದನ್ನ ಕಲಿಸುತ್ತಾ ಇತ್ತು.  ಜೊತೆಯಲ್ಲಿ " Career Guidance Stalls " ಬೇರೆ ಬೇರೆ ವಿಭಾಗಳಿಂದ ಬಂದಿದ್ದ ನಮ್ಮ ಸ್ನೇಹಿತರು, ನಮ್ಮ  juniors ಗೆ ಸಲಹೆ, ಮಾಹಿತಿ ನೀಡಿದರು, ಅವರ ಪ್ರಶ್ನೆಗಳನ್ನ ಉತ್ತರಿಸಿದರು. ಪ್ರತಿಯೊಂದು ಕಾರ್ಯಕ್ರಮಗಳು ಸಕತ್ತಾಗಿತ್ತು, ಕೊನೆಯ ಚರ್ಚಾ ಸ್ಪರ್ಧೆ ಮಾತ್ರ ಎಲ್ಲದಕ್ಕಿಂತ ಮಿಗಿಲಾಗಿತ್ತು, ಅಬ್ಬಬ್ಬಾ ಒಂದೊಂದು ವಿಧ್ಯಾರ್ಥಿಯ ಮಾತುಗಳು ನಮ್ಮನ್ನ ಪುಳಕಗೊಳಿಸುತ್ತಿದ್ದವು, ಬೆಳಗ್ಗೆ ಇಂದ ಮಾಡಿದ ಕೆಲಸಕ್ಕೆಲ್ಲ ಫಲ ಸಿಕ್ಕಿದಂತನಿಸಿತ್ತು. ಯಾಕೆಂದರೆ ಬೆಳಗ್ಗೆ ಕಾರ್ಯಕ್ರಮದ ಚಾಲನೆಯ ಸಮಯದಲ್ಲಿ ಎಲ್ಲದಕ್ಕೂ ಹಿಂಜರಿಯುತ್ತಿದ್ದ ಮಕ್ಕಳೆಲ್ಲ ಸಂಜೆ ಹೊತ್ತಿಗೆ transform ಆಗಿದ್ದರು, ಎಲ್ಲರಲ್ಲೂ  ಛಲ, ಜೋಶ್, ಏನು ಬೇಕಾದರೂ  ಸಾಧಿಸಬಹುದು ಎನ್ನುವ ಮನೋಸ್ಥ್ಯರ್ಯ ಬಂದಂತಿತ್ತು.
ದಿನದ ಕೊನೆಯಲ್ಲಿ  ಬೆಳಗ್ಗೆ ಇಂದ ಮಾಡಿದ್ದ ಸ್ಪರ್ಧೆಗಳ ರಿಸಲ್ಟ್ ಹೇಳಲಾಯಿತು, ನಮ್ಮ " ಎಜುಕೇಶನ್ ಟೀಂ " ಎಲ್ಲರಿಗಿಂತ ಹೆಚ್ಚು ಅಂಕಗಳೊಂದಿಗೆ ಮೊದಲನೇ ಸ್ಥಾನ ಪಡೆದಿತ್ತು. ಬಹುಮಾನ ವಿತರಣೆಗೆ ಟೀಂ ನ ಕರೆದಾಗ ಹುಡುಗರೆಲ್ಲ ಬಂದು "ಅಣ್ಣ ನೀವು ಬನ್ನಿ ,ನಿಮ್ಮಿಂದನೆ ನಾವು ಗೆದ್ದಿರೋದು" ಅಂದಾಗ ಏನೋ ಸಾರ್ಥಕತೆಯ ಮನೋಭಾವ, ಬಹುಮಾನದ ಜೊತೆಯಲ್ಲಿ ಚಾಕಲೇಟಿನ ಪಾಲು ಸಿಕ್ಕಿತ್ತು!
ಮತ್ತೆ ಮೆಸ್ಸಲ್ಲಿ ಊಟ ಮಾಡಿ ಆಯಿತು, ಜೊತೆಗೆ ಮತ್ತೆ ರೂಮ್ಗೆ ಬರುವಾಗ ಎಲ್ಲರು ಸುಸ್ತಾಗಿದ್ದರು, ಮತ್ತೆ ಅದೇ ಹಳೆಯ ನೆನಪುಗಳು, ಚೇಷ್ಟೆಗಳನ್ನ  ಮೆಲುಕು ಹಾಕುತ್ತ ಹಾಸಿಗೆ ಗೆ ಒರಗಿದೆವು, ಎಲ್ಲರು ಗೊರಕೆ ಹೊಡೆಯುವವರೇ, ಎಲ್ಲರ ಗೊರಕೆ ಸೌಂಡು ಸೇರಿ ಸ್ವೀಟ್ ಮೆಲೋಡಿ ತರ ಆಗಿ ಒಳ್ಳೆ ಸುಖನಿದ್ರೆಗೆ ಜಾರಿದೆವು.


ಬೆಳಗ್ಗೆ ಎರಡನೇ ದಿನ ಇನ್ನಷ್ಟು ಹಳೆಯ ವಿದ್ಯಾರ್ಥಿಗಳು ಬಂದು ಸೇರಿಕೊಂಡರು,ಸ್ವಲ್ಪ ಜನ ಸ್ನೇಹಿತರು ಬೆಂಗಳೂರಿಂದ ಗಾಡಿ ಮಾಡ್ಕೊಂಡು ಬಂದಿದ್ರೆ, ಇನ್ನ ಕೆಲವೊಬ್ರು ಆಫ್ರಿಕಾದ Tanzania ಇಂದ ಬಂದಿದ್ರು!!! ಆಫ್ರಿಕಾ ಇಂದ ಬಂದಿದ್ದ  ಜಿ.ಜೆ. ಪ್ರವೀಣ, ಮನೆಗೂ ಹೋಗದೆ ನವೋದಯ ನೋಡೋ ಕುಶಿಲಿ ವಿಮಾನ ನಿಲ್ದಾಣದಿಂದ ಡಿರೆಕ್ಟಾಗಿ, ಬಟ್ಟೆನು ಬದಲಾಯಿಸದೆ ಬಂದಿದ್ದ,  ನಮ್ಮ  ಶಾಲೆಯನ್ನ ನೋಡೋಕೆ ಬರೋದು ಅಂದ್ರೆ ಮತ್ತೆ ಅಷ್ಟೆನ ! ವಿಮಾನ ಇಳಿತಾ ಇದ್ದಾಗೆ ಜೊತೆಗೆ ಏರ್ ಪೋರ್ಟ್ ಅಲ್ಲಿ ಕೆಲಸ ಮಾಡ್ತಿದ್ದ  Flight  Dispatcher ಅವನ ನವೋದಯದ ಸಹಪಾಟಿ , ವಿಜಯ್ ನನ್ನು  ಕೂಡ ಕರ್ಕೊಂಡು ಬಂದುಬಿಟ್ಟಿದ್ದ.  ಎಲ್ಲರನ್ನು ನೋಡಿ ಖುಷಿ ಆಯಿತು ಕೆಲವೊಬ್ಬರ ಮುಖ ನೆನಪಿದ್ದರೆ,ಇನ್ನು ಕೆಲವೊಬ್ಬರ ಹೆಸರೇ ಮರೆತು ಹೋಗಿತ್ತು. ಎಲ್ಲರನ್ನು ಮಾತನಾಡಿಸುತ್ತಿರುವಾಗ ಅನ್ನಿಸ್ತು, ಈ ರೀತಿ ಒಂಸಾರಿ ಅಲ್ಲುಮ್ನಿ ಮೀಟ್ ಅಟೆಂಡ್ ಮಾಡಿದ್ರೆ ಸಾಕು ಯಾವ Social network ಯಾಕೆ ಬೇಕು ಅಂತ, ಕುತ್ಕೊಂಡು ಯೋಚನೆ  ಮಾಡಿದೆ ಸತ್ಯ ಅನ್ನಿಸ್ತು...!!! ಯಾಕೆ  ಗೊತ್ತ, ಸೋಸಿಅಲ್ ನೆಟ್ವರ್ಕ್ ಅಲ್ಲಿ ಏನೇ ನೆಟ್ವರ್ಕ್ ಮಾಡಿಕೊಂಡರು ಅದು ನಮ್ಮ ಸ್ನೇಹಿತರ ಬಳಗಕ್ಕೆ ಸೀಮಿತವಾಗಿರತ್ತೆ  ಆದ್ರೆ ಇಲ್ಲಿ ನೋಡಿ ಯಾವ ಫೀಲ್ಡ್ ಬೇಕು... ಯಾವ stream/field/position ಬೇಕು " Name it we have one from Navodaya ". IIT ಇಂದ ಹಿಡ್ಕೊಂಡು ITI  ಅಲ್ಲಿ ವ್ಯಾಸಂಗ ಮಾಡಿರೋರು ಬೇಕಾ? ಯಾರು  ಬೇಕು achievers from various fields, Enterprenuers, software/hardware professionals, Chemists, Psychologists, Doctors, Managers,Designers, Models, Biotechnologists, PhD holders, Research scholars,patent holders,Teachers, Lawyers.....!!! list goes on , ಯಾವುದೇ ಫೀಲ್ಡ್ ನ ಹೆಸರೇಳಿ ನಮ್ಮ ಒಳಗೆ  ಒಬ್ಬರು ಇರುತ್ತಾರೆ  . ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವವರನ್ನೆಲ್ಲ  ಒಟ್ಟಿಗೆ  ನೋಡೋಕೆ ಎಲ್ಲಿ  ಚಾನ್ಸ್  ಸಿಗತ್ತೆ  ಹೇಳಿ ..!!! ಹೇಯ್ ಸಿಗಲ್ಲ ಅಂತಿರ,ಇಲ್ಲ ಸದ್ಯದಲ್ಲಿ ನೀವೆಲ್ಲರೂ ಮೀಟ್ ಮಾಡಬಹುದು. ಅದೇ " SJC " ಏನಿದು SJC ?? ಹೇಳ್ತೀನಿ...


ಒಹ್  ನಿಮಗೆ  allumni meet ಗೆ  ಬರೋದಿಕ್ಕೆ ಆಗ್ಲಿಲ್ಲ  ಮುಂದಿನ ಡಿಸೆಂಬರ್ ತನಕ  ಕಾಯಬೇಕಲ್ಲ  ಅಂತ  ಅನಿಸ್ತ  ಇದ್ದೀಯ ? ಬೇಜಾರಾಗ್ಬೇಡಿ ನೀವು  ಇವರನ್ನೆಲ್ಲ  ಮೀಟ್  ಮಾಡಬೇಕ ? ನಿಮ್ಮ  ಸ್ನೇಹಿತರನ್ನೆಲ್ಲ ಒಟ್ಟಿಗೆ  ನೋಡಬೇಕ ? ನಿಮ್ಮ  ಹಳೆ  ನವೋದಯದ  ನೆನಪು , ಚೆಸ್ಟೆ , story ಎಲ್ಲ  ನೆನ್ಸ್ಕೊಬೇಕ ? ನಿಮ್ಮ  ಹಳೆಯ  ಗುರುಗಳನ್ನ  ಮಾತಾಡಿಸಬೇಕ ? ನಿಮ್ಮ  ಭವಿಷ್ಯವನ್ನ  ನೋಡಬೇಕ !!! ನಿಮ್ಮ  network ಅನ್ನ  ಬೆಳೆಸಬೇಕ? ನಿಮ್ಮ  ಕೆಲಸದಿಂದ  brake  ತಗೋಬೇಕ ? ಇದಕ್ಕೆಲ್ಲ  ಒಂದೇ  ಉತ್ತರ ... " SJC-2011". ಏನು  ಅಂತ  ಗೊತ್ತಾಗ್ಲಿಲ್ವ ?? Its  Silver jubily celebration   2011 , ನಮ್ಮ  ನವೋದಯ  ಈಗ  25 ವರ್ಷ  ದೊಡ್ಡದಾಗಿದೆ  ಅದಕ್ಕೋಸ್ಕರ  ಎಲ್ಲರನ್ನು  ಸೇರಿಸುವ  ಪ್ರಯತ್ನ ಸಾಗಿದೆ , ನೀವು ಕೂಡ  ತನು  ಮನ  ಧನ  ಸಹಾಯದೊಂದಿದಿಗೆ ಸಕ್ರಿಯವಾಗಿ ಭಾಗವಹಿಸಬಹುದು ... ನವೋದಯದ ಪ್ರಯೇರ್ ಸಾಂಗ್ ಅನ್ನು ಹಾಡಬಹುದು.....!!!

ಅಲ್ಲುಮ್ನಿ ಮೀಟ್ ಶುರು ಆಯಿತು ಎಲ್ಲ ಜೂನಿಯರ್ ಸೀನಿಯರ್ ಗಳ ಪರಿಚಯನು ಆಯಿತು, ಕೆಲವೊಬ್ಬರು ಅವರ ನವೋದಯದ ಹಳೆಯ ಅನುಭವಗಳನ್ನ ಹಂಚಿಕೊಂಡರು, ನಾನು ಅಲ್ಲೇ ಬರೆದ  "ಲೈಫ್ ಇಷ್ಟೇನೆ" ಹಾಡನ್ನು ಹಾಡಿದೆ...
ಕೊನೆಗೆ ಅಲ್ಲುಮ್ನಿ ಹಾಗು  ಪ್ರಸಕ್ತ ನವೋದಯ ವಿಧ್ಯಾರ್ಥಿಗಳ ಜೊತೆ Volleyball ಪಂಧ್ಯ ಕೂಡ ಆಯಿತು, ನಮ್ಮ ಅಲ್ಲುಮ್ನಿ ಟೀಂ ತುಂಬಾನೆ ಚೆನ್ನಾಗಿ ಆಟ ಆಡಿದರು, ಆಟ ಮುಗಿದಾದ ಮೇಲೆ ಹೊರಡೋ ಸಮಯ , ಏನೋ ನನ್ನ ಸ್ಕೂಲ್ ನ ಬಿಟ್ಟು ಹೋಗಬೇಕಲ್ಲ ಅಂತ ದುಃಖ ಆಗ್ತಾ ಇತ್ತು, ಹುಡುಗಿ ತವರು ಮನೆ ಬಿಟ್ಟು ಹೋಗೋವಾಗ ಹೇಗಿರತ್ತೆ ಹಾಗೇ,ದುಃಖದಲ್ಲಿ ನಾನು ಕಾರ್ ಹತ್ತಿ, ನಮ್ಮ ಕಡೆ ಟಾಟಾ ಮಾಡುತಿದ್ದ ಎಲ್ಲರನ್ನ ನೋಡುತ್ತಿರುವಾಗ... ಮತ್ತದೇ ಹುಡುಗ...!!! ಇನ್ನು ಮೂರೂ ಜನ ಹುಡುಗರ ಜೊತೆ... ಬಂದಿದ್ದ... " ಈ ಅಣ್ಣ ನನ್ Cot  ಅಲ್ಲೇ ಇದ್ದಿದ್ದು ಗೊತ್ತ, ಬೈ  ಬೈ ಅಣ್ಣ... " ಅಂದ ಅವನನ್ನ ನೋಡಿ ನಗುತ್ತ ನನ್ನ ಪ್ರೀತಿಯ ಸ್ಕೂಲಿಂದ, ಮತ್ತದೇ ಹಳೆಯ ನೆನಪಿನೊಂದಿಗೆ... ಬೆಂಗಳೂರಿಗೆ ಪ್ರಯಾಣ ಬೆಳೆಸಿದೆವು ..... :) :) 






Monday, December 20, 2010

IGNITE 2010.. Fly HIGH ನವೋದಯ workshop ನ ನೆನಪು

Ignite 2010, Fly HIGH... Its the workshop for Navodyans, but its not...!!! Its for everyone School children, College students, Teachers and Professionals. ಯಾಕೆಂದರೆ ಎಲ್ಲರು ಏನಾದ್ರು ಒಳ್ಳೇದನ್ನ ತೆಕೊಂಡು ಹೋಗ್ಬೋದು... Actually ಹೇಳ್ಬೇಕಂದ್ರೆ ಈ ಬಾರಿ ನಾನು  ಹೋಗಿದ್ದು to Ingite the young minds of our Navodaya juniors... But unknowingly  workshop has ignited some thing un-explainable in me only. Now i have started dreaming BIG also.. you know how?? i attended 2009 work shop too.. motto of that workshop was to Dream BIG... This time i realized  that to achieve my dream first i should wake up from my dream and start working on it.. you cannot climb the ladder of success by keeping your hands in your pocket...!!!
My dream is ......!!!  hmm.. i started working on it.. Thanks to Ignite... :) I know the techniques/skills now to achieve my dreams. Very shortly i will be achieving that .
  


When i am thanking IGNITE i have to tell you guys that ಅಲ್ಲಿ ಏನಾಯ್ತು ಆ ತರಹ ಅಂತ ... ಒಂದು ತಿಂಗಳ ಹಿಂದೇನೆ ತಯಾರಿ ಶುರು, Dec 04 -05  ಕಾಯ್ತಾ ಇದ್ವಿ... ನನ್ನ ನೋವೋದಯ class mates ಎಲ್ಲ ನಾವು ಬರ್ತಿವಿ , ನಾವು ಬರ್ತಿವಿ ಅಂತ  ಕೊನೆಗೆ ಕೈ ಕೊಟ್ಟಾಗ ತುಂಬಾ ಬೇಜಾರನ್ನಿಸ್ತು ... ಬಟ್  ಯಾರು ಹೋಗಿಲ್ಲ ಅಂದ್ರೆ ನಮ್ಮದು ಒಂದು batch ಅಂತ ಇತ್ತು ಅಂತ ಯಾರಿಗೂ ಗೊತ್ತಾಗದೆ ಇದ್ರೆ ಕಷ್ಟ ಅಂತ ನಾನು ಯಶವಂತ್ ನಮ್ batch ಇಂದ ಹೊರಡೋ ಪ್ಲಾನ್ ಆಯಿತು. But which session to take for  workshop ಅಂತ  ಯೋಚನೆ  ಮಾಡೋವಾಗ  ಹೊಳ್ದೆದ್ದಿದ್ದು  Scholarships/Education loans...!!! Scholarships best ಅನಿಸ್ತು , ಯಾಕಂದ್ರೆ  ಒಂದು ಸಾರಿ scholarship ಸಿಕ್ಕಿದ  ಮೇಲೆ  ವಾಪಾಸ್  ಕೊಡಬೇಕಾಗಿಲ್ಲ  ಅಲ್ವಾ ... laon ಆದ್ರೆ  ವಾಪಾಸ್  ಕೊಡ್ಬೇಕು  ಅದು  ಬಡ್ಡಿ  ಜೊತೆ ... ಜೊತೆಗೆ ಹುಡುಗ್ರು  ಅಸ್ಟೆ ಫ್ರೀ  ಆಗಿ  ದುಡ್ಡು  ಸಿಗತ್ತೆ  ಅಂದ್ರೆ  ಎಲ್ಲ  ಶಿಸ್ತಾಗಿ ಕೂತು ಕೇಳ್ತಾರೆ  ಅಂತ ತಯಾರಿ ಶುರು ಮಾಡಿದೆ.. Web ಅಲ್ಲಿ information ನೋಡಿ shock ಆಯಿತು..  ಈ ಕೆಲಸ ಮುಂಚೆನೇ ಮಾಡಿದ್ರೆ ನಾನು education loan ತಗೊಳೋದೇ ಬೇಡ ಆಗಿತ್ತು ಅಂತ  ಅನಿಸ್ತು, so atleast juniors ಗೆ ಆದ್ರು ಹೆಲ್ಪ್ ಆಗಲಿ ಅಂತ ಎಲ್ಲ collect ಮಾಡಿ  ppt ರೆಡಿ ಮಾಡಿ ಕ್ಯಾಲೆಂಡರ್ ನೋಡಿದೆ, ಆಗಲೇ 3 Dec ಆಗ್ಬಿಟ್ಟಿತ್ತು.
ಅರ್ದ ದಿನ ಕಂಪನಿ ಗೆ ರಜಾ ಹಾಕಿ, ನನ್ನ ಸ್ಕೂಲ್ ನೋಡೋ ಕುಶಿಲಿ ಆಫೀಸ್ ಇಂದ ೧ ಗಂಟೆ ಬೇಗನೆ ಹೊರಟೆ ,ನಮ್ಮ presidentara ಕಾರ್ ಬಂತು ನಮ್ seniors ಜೊತೆ  ಪಯಣ ಸ್ಟಾರ್ಟ್ ಆಯಿತು ಮಾಗಡಿ, ಕುಣಿಗಲ್, ಹಾಸನ  ಬರೋಸ್ತ್ರಲ್ಲಿ ಮಾತಲ್ಲಿ Yediyurappa , ಮೋಟಮ್ಮ,  Stem cells , Patents , ಸ್ವಾಮಿ ನಿತ್ಯಾನಂದ  ಇಂದ ಹಿಡ್ಕೊಂಡು new fusion sofware ತನಕ ಎಲ್ಲರು ಒಂಸರಿ ಬಂದೊಗಾಯ್ತು .. ಹಾಸನ ಮುಟ್ಟುವಾಗ ಸೂರ್ಯ ನಮ್ ಮಾತು ಕೇಳಿ  ಕೇಳಿ ಸಾಕಾಗಿ  escape ಆಗಿದ್ದ... ಕತ್ತೆಲೆ ಆಗಿತ್ತು ನಮ್ president ರವಿಪ್ರಕಾಶ್ ಅವ್ರ  ಊಟದ ಟೈಮ್ ಬೇರೆ ಆಗಿತ್ತು. ಸ್ವಲ್ಪ ಶಾಪಿಂಗ್ ಮಾಡಿದ್ವಿ ವರ್ಕ್ ಶಾಪ್ ಗೆ, ಸ್ವಲ್ಪ ಚೌಕಾಸಿ ಮಾಡಿ 2 ರುಪಾಯಿನು ಉಳ್ಸಿದ್ವಿ, ಉಟಕ್ಕೆ ಕೂರೋಕು ಇನ್ನೊಂದು ಟೀಂ Join ಆಯಿತು, ಬೆಂಗಳೂರು ಇಂದ ಹೊರಡೋವಾಗ ನಮಗಿಂತ  2 ಗಂಟೆ ಲೇಟ್ ಹೊರಟಿದ್ದರುನು  F -1 drivers , ಜೀವನ್ ಮತ್ತು  ರಾಜೇಶ್ ಡ್ರೈವಿಂಗ್ ಇಂದ ನಮ್ ಜೊತೆ ಬಂದು ಸೇರಾಗಿತ್ತು, ಜೊತೆಯಲ್ಲಿ ಶ್ವೇತ, ನಮ್ರತಾ, ರವಿಪ್ರಕಾಶ್ . ಊಟ  ಮುಗಿಸಿ ಹೊರಟ ನಾವು ಮತ್ತೆ ಹಳೆ ಹಾಡು, ಕಾರ್ ಮುಂದೆ ಸೈಕಲ್ ಬಂದ್ರುನು ಹೆದರೋ ರವಿ ನಾಡಿಗ್ ಗೆ safety ಬೆಲ್ಟ್ ಹಾಕಿ ಕೂರಸಿ, ಇನ್ನೇನ್ ನಿದ್ದೆ  ಬಂತು ಅನ್ನೋಸ್ತ್ರಲ್ಲಿ ಆನಂದ್ ಊರು ಚಿಕ್ಕಮಾಗರವಲ್ಲ್ಲಿ ಮನೆ ಬಂದೆ ಬಿಡ್ತು, ಮಲೆನಾಡು ಹೇಳ್ಬೇಕ.. ಕೊರೆವ ಚಳಿ,ಮನೆ ಪಕ್ಕದಲ್ಲಿ ಕೆರೆ, ದೊರದಲ್ಲಿ ಕೆಲಿಸ್ತಿದ್ದ ಆ ಹಬ್ಬ, ಜಾತ್ರೆಯ  ಸೌಂಡು ಏನ್ ಹೇಳೋದ್ರಿ...! ನಮ್ಮು ಊರು ಅಂತ ಫುಲ್ ಖುಷಿ ಅಗೊಸ್ತರಲ್ಲಿ ಆನಂದ್ ಮನೇಲಿ ಗೀಬ, ಲಾಸ್ಟ್ ವರ್ಷ ಕೂಡ ಇತ್ತಂತೆ,ನನಗೆ ಆಶ್ಚರ್ಯ ಹೇಗೆ ಆನಂದ್ ಮನೆ ಹಸು ಅಲ್ಲುಮ್ನಿ ಡೇ ಇರೋ ಟೈಮ್ ಅಲ್ಲೇ  ಕರು ಹಾಕತ್ತೆ ಅಂತ .. ಏನೋ ಇಂತ ಚಾನ್ಸ್ ಯಾರಿಗುಂಟು ಯಾರಿಗಿಲ್ಲ,ಅದು  ರಾತ್ರಿ ೧೨ ಗಂಟೆಗೆ ಅಂತ ಎಲ್ಲ ಚೆನ್ನಾಗಿ ಹೊಡೆದರು.
ಮತ್ತೆ ಅಲ್ಲಿಂದ ಹೋರಟು ನನ್ನ ಪ್ರೀತಿಯ ಸ್ಕೂಲ್ ಸೇರೋವಾಗ ೨ ಗಂಟೆ ಆಗೋಗಿತ್ತು, ಸ್ಕೂಲ್ ಹತ್ತಿರ ಬರೋವಾಗ ಅದೇ boards, gate, ಹೃದಯದ ಬಡಿತ ಜೋರಾಗಿತ್ತು (ನವೋದಯದಲ್ಲಿ ಇರುವಾಗಲೂ ಅಸ್ಟೆ ರಜೆ ಇಂದ ವಾಪಾಸ್ ಬರೋವಾಗ ಸೀಗೊಡು ಬಂದ್ರೆ ಸಾಕು , ಹಾರ್ಟ್ ಬೀಟ್ ಜಾಸ್ತಿ, ಕೊಟ್ಟಿರೋ assignments ಹೇಗಪ್ಪ ಬೇಗ ಮುಗ್ಸೋದು ಅಂತ) ನವೋದಯದ ಲೈಫ್ ಹಾಗೆ ಒಂಸಾರಿ ಕಣ್ಮುಂದೆ ಬಂದೋಯ್ತು.ಕಾರ್ ಇಳಿದು, ಅದಾಗಲೇ ರೀಚ್ ಆಗಿ ಮಲಗಿದ್ದ ಸಂಪತ್ ನ ಟೀಂ ನ ಏಳಿಸಿ ಒಳಗೆ ಹೋಗ್ತಾ ಇದ್ದಾಗೆ, ನೀಟ್ ಆಗಿ ಹಾಸಿಟ್ಟಿದ್ದ ಬೆಡ್ ನೋಡಿ, ಇನ್ನೇನ್ ನಿದ್ದೆಗೆ ಹಾರಬೇಕು ಅನ್ನೋಸ್ತ್ರಲ್ಲಿ ರವಿಪ್ರಕಾಶ್ ಎಲ್ಲರನ್ನು ಏಳಿಸಿ ಪೋಸ್ಟರ್ ಕಟ್ ಮಾಡೋಕೆ ಕೊಟ್ರು, ಛೆ ಅಸ್ಟೊಂದು ಚೌಕಾಸಿ  ಮಾಡಿ ತಂದಿದ್ದ ಪೋಸ್ಟರ್ ಕಟ್ ಮಾಡಬೇಕಲ್ಲ ಅಂತ ನಾನು ನೋಡ್ತಾ ಇದ್ರೆ ನಿದ್ದೆ ಕಣ್ಣಲ್ಲಿ ಆನಂದ ಅರ್ದ ಕಟ್ ಮಾಡಿ ಆಗಿತ್ತು , ಎಲ್ಲ ತಯಾರಿ ನಡೆಯುವಾಗ ನನಗೆ  ಯಾವಾಗ ನಿದ್ದೆ ಬಂತೋ ಗೊತ್ತಿಲ್ಲ, ಬೆಳಗ್ಗೆ ಎದ್ದು ನೋಡಿದ್ರೆ ಮುಂದೆ ಟೀ ರೆಡಿ, ಯೆಶ್ವಂತ್ ಹೇಳಿದಾಗೆ ಟೀಚೆರ್ಸ್ ಟೀ. ಹಲ್ಲು ಉಜ್ಜೋಕು ಮುಂಚೆ ಟೀ  ಕುದಿದಾಯ್ತು, ಬಾತ್ ರೂಂ ಗೆ ಇರೋ ರಶ್ ನೋಡಿ ಹೊರಗಡೆ ಹೋಗಿ ಐಸ್ ಕ್ವೊಲ್ದ್ ವಾಟರ್ ಅಲ್ಲಿ  ಸ್ನಾನ ಮಾಡಿ ರೆಡಿ ಅಗೊಸ್ತ್ರಲ್ಲಿ 9 ಗಂಟೆ ಆಯಿತು.
ಮೆಸ್ಸ್ ಗೆ ಬಂದ್ವಿ ಅದೇ ಅಂಕಲ್ ಗಳು, ಅದೇ ಪ್ಲೇಟ್ ಗಳು, ನಮ್ ತರಾನೆ ಚಡ್ಡಿ ಹಾಕ್ಕೊಂಡು ಓಡಾಡ್ತಾ ಇದ್ದ ನಮ್ಮ juniors ಗಳು, ಆ ಮುಗ್ದ ಹುಡುಗರನ್ನ ನೋಡ್ತಾ  ಒಮ್ಮೆ ನಮ್ಮ ಬಾಲ್ಯ ನೆನಪಾಗಿ , ಛೆ ಎಸ್ಟ್ ಬೇಗ ದೊಡ್ದೊನಗ್ಬಿತ್ತೆನಪ್ಪ ಅಂತ ಅನಿಸ್ತು. ಅಸ್ತ್ರಲ್ಲಿ ತಿಂಡಿ ಬಾಯಿ ಗೆ ಬಿಲೋಸ್ತ್ರಲ್ಲಿ ಎಲಾಲ್ ಮರೆತೋಗಿ ಅಲ್ಲೇ ಇದಿನೇನೋ ಅಂತ ಅನಿಸ್ತ ಇತ್ತು, ನವೋದಯದ ಯಾವ part ನೋಡಿದರು ಅದಕ್ಕೆ ಹೊಂದಿಕೊಂಡ ನಮ್ಮ  ನೆನಪುಗಳು ಬಂದೊಗತ  ಇತ್ತು, ಮತ್ತೊಮ್ಮೆ ನಮ್ಮ classmates ನ ನೆನಪಾಯ್ತು..
ಹೊರಗೆ ಬರೋವಾಗ ಮತ್ತೊಮ್ಮೆ campus ನೋಡಿ ಏನೋ ಒಂತರ ಖುಷಿ , ಫುಲ್ change ಆಗಿರೋ fields , ಬೆಳೆದು ನಿಂತಿರುವ ಗಿಡ/ಮರಗಳು, ಅದನ್ನ ನೋಡಿ ನಮ್ ಜೊತೆ ಇದ್ದ volunteers ಹೇಳತ ಇದ್ದ ಮಾತುಗಳು " ಹೇಯ್ ಈ ಗಿಡ ನಾನೆ ಹಾಕಿದ್ದು, ಎಷ್ಟು ದೊಡ್ದಾಗಿ ಬಿಟ್ಟಿದೆ ಅಂತ" ಒಂದೇ dailogue ನ most of all ಬಂದಿದ್ದ ಎಲ್ಲ seniors ಹೇಳಯ್ತು... ನಾನು ಕೂಡ ಹೇಳಯ್ತು .. :)  ಬಟ್ ನಿಜವಾಗ್ಲು ಗಿಡ ಯಾರು ಹಾಕಿದ್ದು ಅನ್ನೋದು ಮಾತ್ರ ಗೊತ್ತಾಗ್ಲಿಲ್ಲ . ಎಲ್ಲರು ನಂದೇ ಗಿಡ ಅನ್ನೋ ಹೆಮ್ಮೆ ಇಂದ ಮುಂದೆ ಸಾಗಿದ್ವಿ , ನಮ್ಮನ್ನ ನೋಡಿದ  MP ಹಾಲ್ ಬೇಗ ಬಂದು ಪ್ರೋಗ್ರಾಮ್ ಸ್ಟಾರ್ಟ್ ಮಾಡ್ರಪ್ಪ ಅಂತಿತ್ತು.
MP ಹಾಲಲ್ಲಿ ಅದಾಗಲೇ ವಿದ್ಯಾರ್ಥಿಗಳೆಲ್ಲ ಬಂದು ಶಿಸ್ತಾಗಿ ಕೂತಾಗಿತ್ತು, ದೀಪ ಬೆಳಗಿಸಿ , ಪ್ರಾರ್ಥನೆ ಇಂದ IGNITE ಗೆ ಚಲನೆ ದೊರೆಯಿತು.
ಶ್ವೇತನ curtain raiser ಇಂದ ಸ್ಟಾರ್ಟ್ ಅದ ಪ್ರೋಗ್ರಾಮ್ ಸುಪರೋ ಸೂಪರ್, ನಾನು ಪ್ರೋಗ್ರಾಮ್  Attend ಮಾಡೋಕೆ ಬಂದಿದಿನ ಇಲ್ಲ conduct ಮಾಡೋಕೆ ಬಂದಿದಿನೋ ಗೊತ್ತಾಗ್ಲಿಲ್ಲ. what an opportunity for us , to learn /grow from all angles , leadership qualities , how to speak, how to present, i can just tell it was a over all a personality development for us... Really i got motivated from each n every event.. how to express that now.. u have to come for next work shop in 2011 and experience that.
 Thanks to IGNITE and  ಸಂಪತ್  again, ಬ್ಲಾಗ್ ಅಂದ್ರೇನೆ ಏನು ಅನ್ನೋದು ಗೊತ್ತ್ತಿಲ್ಲದ ನಂಗೆ, ಇವತ್ತು ಬ್ಲಾಗ್ ಮಾಡಬೆಕಂದ್ರೆ Ignite ಕಾರಣ. ಇನ್ನೇನು ಬೇಕು ಪ್ರತೀ ಸರಿ IGNITE ಅಲ್ಲಿ ಭಾಗವಹಿಸಿ ಏನಾದರು ಹೊಸತನ್ನ ತಗೊಂಡು ಹೋಗಿ... ಅದಕ್ಕೆ ಸಾಕ್ಷಿ.. ಈ ಬ್ಲಾಗು :)
ಸಮಯದ ಅಭಾವದ ಕಾರಣ ಅರ್ಧ experience ಮಾತ್ರ ಬರೆದಿದ್ದೇನೆ, ಇನ್ನರ್ದ ಸದ್ಯದಲ್ಲಿ ಬರಲಿದೆ...