Ignite 2010, Fly HIGH... Its the workshop for Navodyans, but its not...!!! Its for everyone School children, College students, Teachers and Professionals. ಯಾಕೆಂದರೆ ಎಲ್ಲರು ಏನಾದ್ರು ಒಳ್ಳೇದನ್ನ ತೆಕೊಂಡು ಹೋಗ್ಬೋದು... Actually ಹೇಳ್ಬೇಕಂದ್ರೆ ಈ ಬಾರಿ ನಾನು ಹೋಗಿದ್ದು to Ingite the young minds of our Navodaya juniors... But unknowingly workshop has ignited some thing un-explainable in me only. Now i have started dreaming BIG also.. you know how?? i attended 2009 work shop too.. motto of that workshop was to Dream BIG... This time i realized that to achieve my dream first i should wake up from my dream and start working on it.. you cannot climb the ladder of success by keeping your hands in your pocket...!!!
My dream is ......!!! hmm.. i started working on it.. Thanks to Ignite... :) I know the techniques/skills now to achieve my dreams. Very shortly i will be achieving that .
When i am thanking IGNITE i have to tell you guys that ಅಲ್ಲಿ ಏನಾಯ್ತು ಆ ತರಹ ಅಂತ ... ಒಂದು ತಿಂಗಳ ಹಿಂದೇನೆ ತಯಾರಿ ಶುರು, Dec 04 -05 ಕಾಯ್ತಾ ಇದ್ವಿ... ನನ್ನ ನೋವೋದಯ class mates ಎಲ್ಲ ನಾವು ಬರ್ತಿವಿ , ನಾವು ಬರ್ತಿವಿ ಅಂತ ಕೊನೆಗೆ ಕೈ ಕೊಟ್ಟಾಗ ತುಂಬಾ ಬೇಜಾರನ್ನಿಸ್ತು ... ಬಟ್ ಯಾರು ಹೋಗಿಲ್ಲ ಅಂದ್ರೆ ನಮ್ಮದು ಒಂದು batch ಅಂತ ಇತ್ತು ಅಂತ ಯಾರಿಗೂ ಗೊತ್ತಾಗದೆ ಇದ್ರೆ ಕಷ್ಟ ಅಂತ ನಾನು ಯಶವಂತ್ ನಮ್ batch ಇಂದ ಹೊರಡೋ ಪ್ಲಾನ್ ಆಯಿತು. But which session to take for workshop ಅಂತ ಯೋಚನೆ ಮಾಡೋವಾಗ ಹೊಳ್ದೆದ್ದಿದ್ದು Scholarships/Education loans...!!! Scholarships best ಅನಿಸ್ತು , ಯಾಕಂದ್ರೆ ಒಂದು ಸಾರಿ scholarship ಸಿಕ್ಕಿದ ಮೇಲೆ ವಾಪಾಸ್ ಕೊಡಬೇಕಾಗಿಲ್ಲ ಅಲ್ವಾ ... laon ಆದ್ರೆ ವಾಪಾಸ್ ಕೊಡ್ಬೇಕು ಅದು ಬಡ್ಡಿ ಜೊತೆ ... ಜೊತೆಗೆ ಹುಡುಗ್ರು ಅಸ್ಟೆ ಫ್ರೀ ಆಗಿ ದುಡ್ಡು ಸಿಗತ್ತೆ ಅಂದ್ರೆ ಎಲ್ಲ ಶಿಸ್ತಾಗಿ ಕೂತು ಕೇಳ್ತಾರೆ ಅಂತ ತಯಾರಿ ಶುರು ಮಾಡಿದೆ.. Web ಅಲ್ಲಿ information ನೋಡಿ shock ಆಯಿತು.. ಈ ಕೆಲಸ ಮುಂಚೆನೇ ಮಾಡಿದ್ರೆ ನಾನು education loan ತಗೊಳೋದೇ ಬೇಡ ಆಗಿತ್ತು ಅಂತ ಅನಿಸ್ತು, so atleast juniors ಗೆ ಆದ್ರು ಹೆಲ್ಪ್ ಆಗಲಿ ಅಂತ ಎಲ್ಲ collect ಮಾಡಿ ppt ರೆಡಿ ಮಾಡಿ ಕ್ಯಾಲೆಂಡರ್ ನೋಡಿದೆ, ಆಗಲೇ 3 Dec ಆಗ್ಬಿಟ್ಟಿತ್ತು.
ಅರ್ದ ದಿನ ಕಂಪನಿ ಗೆ ರಜಾ ಹಾಕಿ, ನನ್ನ ಸ್ಕೂಲ್ ನೋಡೋ ಕುಶಿಲಿ ಆಫೀಸ್ ಇಂದ ೧ ಗಂಟೆ ಬೇಗನೆ ಹೊರಟೆ ,ನಮ್ಮ presidentara ಕಾರ್ ಬಂತು ನಮ್ seniors ಜೊತೆ ಪಯಣ ಸ್ಟಾರ್ಟ್ ಆಯಿತು ಮಾಗಡಿ, ಕುಣಿಗಲ್, ಹಾಸನ ಬರೋಸ್ತ್ರಲ್ಲಿ ಮಾತಲ್ಲಿ Yediyurappa , ಮೋಟಮ್ಮ, Stem cells , Patents , ಸ್ವಾಮಿ ನಿತ್ಯಾನಂದ ಇಂದ ಹಿಡ್ಕೊಂಡು new fusion sofware ತನಕ ಎಲ್ಲರು ಒಂಸರಿ ಬಂದೊಗಾಯ್ತು .. ಹಾಸನ ಮುಟ್ಟುವಾಗ ಸೂರ್ಯ ನಮ್ ಮಾತು ಕೇಳಿ ಕೇಳಿ ಸಾಕಾಗಿ escape ಆಗಿದ್ದ... ಕತ್ತೆಲೆ ಆಗಿತ್ತು ನಮ್ president ರವಿಪ್ರಕಾಶ್ ಅವ್ರ ಊಟದ ಟೈಮ್ ಬೇರೆ ಆಗಿತ್ತು. ಸ್ವಲ್ಪ ಶಾಪಿಂಗ್ ಮಾಡಿದ್ವಿ ವರ್ಕ್ ಶಾಪ್ ಗೆ, ಸ್ವಲ್ಪ ಚೌಕಾಸಿ ಮಾಡಿ 2 ರುಪಾಯಿನು ಉಳ್ಸಿದ್ವಿ, ಉಟಕ್ಕೆ ಕೂರೋಕು ಇನ್ನೊಂದು ಟೀಂ Join ಆಯಿತು, ಬೆಂಗಳೂರು ಇಂದ ಹೊರಡೋವಾಗ ನಮಗಿಂತ 2 ಗಂಟೆ ಲೇಟ್ ಹೊರಟಿದ್ದರುನು F -1 drivers , ಜೀವನ್ ಮತ್ತು ರಾಜೇಶ್ ಡ್ರೈವಿಂಗ್ ಇಂದ ನಮ್ ಜೊತೆ ಬಂದು ಸೇರಾಗಿತ್ತು, ಜೊತೆಯಲ್ಲಿ ಶ್ವೇತ, ನಮ್ರತಾ, ರವಿಪ್ರಕಾಶ್ . ಊಟ ಮುಗಿಸಿ ಹೊರಟ ನಾವು ಮತ್ತೆ ಹಳೆ ಹಾಡು, ಕಾರ್ ಮುಂದೆ ಸೈಕಲ್ ಬಂದ್ರುನು ಹೆದರೋ ರವಿ ನಾಡಿಗ್ ಗೆ safety ಬೆಲ್ಟ್ ಹಾಕಿ ಕೂರಸಿ, ಇನ್ನೇನ್ ನಿದ್ದೆ ಬಂತು ಅನ್ನೋಸ್ತ್ರಲ್ಲಿ ಆನಂದ್ ಊರು ಚಿಕ್ಕಮಾಗರವಲ್ಲ್ಲಿ ಮನೆ ಬಂದೆ ಬಿಡ್ತು, ಮಲೆನಾಡು ಹೇಳ್ಬೇಕ.. ಕೊರೆವ ಚಳಿ,ಮನೆ ಪಕ್ಕದಲ್ಲಿ ಕೆರೆ, ದೊರದಲ್ಲಿ ಕೆಲಿಸ್ತಿದ್ದ ಆ ಹಬ್ಬ, ಜಾತ್ರೆಯ ಸೌಂಡು ಏನ್ ಹೇಳೋದ್ರಿ...! ನಮ್ಮು ಊರು ಅಂತ ಫುಲ್ ಖುಷಿ ಅಗೊಸ್ತರಲ್ಲಿ ಆನಂದ್ ಮನೇಲಿ ಗೀಬ, ಲಾಸ್ಟ್ ವರ್ಷ ಕೂಡ ಇತ್ತಂತೆ,ನನಗೆ ಆಶ್ಚರ್ಯ ಹೇಗೆ ಆನಂದ್ ಮನೆ ಹಸು ಅಲ್ಲುಮ್ನಿ ಡೇ ಇರೋ ಟೈಮ್ ಅಲ್ಲೇ ಕರು ಹಾಕತ್ತೆ ಅಂತ .. ಏನೋ ಇಂತ ಚಾನ್ಸ್ ಯಾರಿಗುಂಟು ಯಾರಿಗಿಲ್ಲ,ಅದು ರಾತ್ರಿ ೧೨ ಗಂಟೆಗೆ ಅಂತ ಎಲ್ಲ ಚೆನ್ನಾಗಿ ಹೊಡೆದರು.
ಮತ್ತೆ ಅಲ್ಲಿಂದ ಹೋರಟು ನನ್ನ ಪ್ರೀತಿಯ ಸ್ಕೂಲ್ ಸೇರೋವಾಗ ೨ ಗಂಟೆ ಆಗೋಗಿತ್ತು, ಸ್ಕೂಲ್ ಹತ್ತಿರ ಬರೋವಾಗ ಅದೇ boards, gate, ಹೃದಯದ ಬಡಿತ ಜೋರಾಗಿತ್ತು (ನವೋದಯದಲ್ಲಿ ಇರುವಾಗಲೂ ಅಸ್ಟೆ ರಜೆ ಇಂದ ವಾಪಾಸ್ ಬರೋವಾಗ ಸೀಗೊಡು ಬಂದ್ರೆ ಸಾಕು , ಹಾರ್ಟ್ ಬೀಟ್ ಜಾಸ್ತಿ, ಕೊಟ್ಟಿರೋ assignments ಹೇಗಪ್ಪ ಬೇಗ ಮುಗ್ಸೋದು ಅಂತ) ನವೋದಯದ ಲೈಫ್ ಹಾಗೆ ಒಂಸಾರಿ ಕಣ್ಮುಂದೆ ಬಂದೋಯ್ತು.ಕಾರ್ ಇಳಿದು, ಅದಾಗಲೇ ರೀಚ್ ಆಗಿ ಮಲಗಿದ್ದ ಸಂಪತ್ ನ ಟೀಂ ನ ಏಳಿಸಿ ಒಳಗೆ ಹೋಗ್ತಾ ಇದ್ದಾಗೆ, ನೀಟ್ ಆಗಿ ಹಾಸಿಟ್ಟಿದ್ದ ಬೆಡ್ ನೋಡಿ, ಇನ್ನೇನ್ ನಿದ್ದೆಗೆ ಹಾರಬೇಕು ಅನ್ನೋಸ್ತ್ರಲ್ಲಿ ರವಿಪ್ರಕಾಶ್ ಎಲ್ಲರನ್ನು ಏಳಿಸಿ ಪೋಸ್ಟರ್ ಕಟ್ ಮಾಡೋಕೆ ಕೊಟ್ರು, ಛೆ ಅಸ್ಟೊಂದು ಚೌಕಾಸಿ ಮಾಡಿ ತಂದಿದ್ದ ಪೋಸ್ಟರ್ ಕಟ್ ಮಾಡಬೇಕಲ್ಲ ಅಂತ ನಾನು ನೋಡ್ತಾ ಇದ್ರೆ ನಿದ್ದೆ ಕಣ್ಣಲ್ಲಿ ಆನಂದ ಅರ್ದ ಕಟ್ ಮಾಡಿ ಆಗಿತ್ತು , ಎಲ್ಲ ತಯಾರಿ ನಡೆಯುವಾಗ ನನಗೆ ಯಾವಾಗ ನಿದ್ದೆ ಬಂತೋ ಗೊತ್ತಿಲ್ಲ, ಬೆಳಗ್ಗೆ ಎದ್ದು ನೋಡಿದ್ರೆ ಮುಂದೆ ಟೀ ರೆಡಿ, ಯೆಶ್ವಂತ್ ಹೇಳಿದಾಗೆ ಟೀಚೆರ್ಸ್ ಟೀ. ಹಲ್ಲು ಉಜ್ಜೋಕು ಮುಂಚೆ ಟೀ ಕುದಿದಾಯ್ತು, ಬಾತ್ ರೂಂ ಗೆ ಇರೋ ರಶ್ ನೋಡಿ ಹೊರಗಡೆ ಹೋಗಿ ಐಸ್ ಕ್ವೊಲ್ದ್ ವಾಟರ್ ಅಲ್ಲಿ ಸ್ನಾನ ಮಾಡಿ ರೆಡಿ ಅಗೊಸ್ತ್ರಲ್ಲಿ 9 ಗಂಟೆ ಆಯಿತು.
ಮೆಸ್ಸ್ ಗೆ ಬಂದ್ವಿ ಅದೇ ಅಂಕಲ್ ಗಳು, ಅದೇ ಪ್ಲೇಟ್ ಗಳು, ನಮ್ ತರಾನೆ ಚಡ್ಡಿ ಹಾಕ್ಕೊಂಡು ಓಡಾಡ್ತಾ ಇದ್ದ ನಮ್ಮ juniors ಗಳು, ಆ ಮುಗ್ದ ಹುಡುಗರನ್ನ ನೋಡ್ತಾ ಒಮ್ಮೆ ನಮ್ಮ ಬಾಲ್ಯ ನೆನಪಾಗಿ , ಛೆ ಎಸ್ಟ್ ಬೇಗ ದೊಡ್ದೊನಗ್ಬಿತ್ತೆನಪ್ಪ ಅಂತ ಅನಿಸ್ತು. ಅಸ್ತ್ರಲ್ಲಿ ತಿಂಡಿ ಬಾಯಿ ಗೆ ಬಿಲೋಸ್ತ್ರಲ್ಲಿ ಎಲಾಲ್ ಮರೆತೋಗಿ ಅಲ್ಲೇ ಇದಿನೇನೋ ಅಂತ ಅನಿಸ್ತ ಇತ್ತು, ನವೋದಯದ ಯಾವ part ನೋಡಿದರು ಅದಕ್ಕೆ ಹೊಂದಿಕೊಂಡ ನಮ್ಮ ನೆನಪುಗಳು ಬಂದೊಗತ ಇತ್ತು, ಮತ್ತೊಮ್ಮೆ ನಮ್ಮ classmates ನ ನೆನಪಾಯ್ತು..
ಹೊರಗೆ ಬರೋವಾಗ ಮತ್ತೊಮ್ಮೆ campus ನೋಡಿ ಏನೋ ಒಂತರ ಖುಷಿ , ಫುಲ್ change ಆಗಿರೋ fields , ಬೆಳೆದು ನಿಂತಿರುವ ಗಿಡ/ಮರಗಳು, ಅದನ್ನ ನೋಡಿ ನಮ್ ಜೊತೆ ಇದ್ದ volunteers ಹೇಳತ ಇದ್ದ ಮಾತುಗಳು " ಹೇಯ್ ಈ ಗಿಡ ನಾನೆ ಹಾಕಿದ್ದು, ಎಷ್ಟು ದೊಡ್ದಾಗಿ ಬಿಟ್ಟಿದೆ ಅಂತ" ಒಂದೇ dailogue ನ most of all ಬಂದಿದ್ದ ಎಲ್ಲ seniors ಹೇಳಯ್ತು... ನಾನು ಕೂಡ ಹೇಳಯ್ತು .. :) ಬಟ್ ನಿಜವಾಗ್ಲು ಗಿಡ ಯಾರು ಹಾಕಿದ್ದು ಅನ್ನೋದು ಮಾತ್ರ ಗೊತ್ತಾಗ್ಲಿಲ್ಲ . ಎಲ್ಲರು ನಂದೇ ಗಿಡ ಅನ್ನೋ ಹೆಮ್ಮೆ ಇಂದ ಮುಂದೆ ಸಾಗಿದ್ವಿ , ನಮ್ಮನ್ನ ನೋಡಿದ MP ಹಾಲ್ ಬೇಗ ಬಂದು ಪ್ರೋಗ್ರಾಮ್ ಸ್ಟಾರ್ಟ್ ಮಾಡ್ರಪ್ಪ ಅಂತಿತ್ತು.
MP ಹಾಲಲ್ಲಿ ಅದಾಗಲೇ ವಿದ್ಯಾರ್ಥಿಗಳೆಲ್ಲ ಬಂದು ಶಿಸ್ತಾಗಿ ಕೂತಾಗಿತ್ತು, ದೀಪ ಬೆಳಗಿಸಿ , ಪ್ರಾರ್ಥನೆ ಇಂದ IGNITE ಗೆ ಚಲನೆ ದೊರೆಯಿತು.
ಶ್ವೇತನ curtain raiser ಇಂದ ಸ್ಟಾರ್ಟ್ ಅದ ಪ್ರೋಗ್ರಾಮ್ ಸುಪರೋ ಸೂಪರ್, ನಾನು ಪ್ರೋಗ್ರಾಮ್ Attend ಮಾಡೋಕೆ ಬಂದಿದಿನ ಇಲ್ಲ conduct ಮಾಡೋಕೆ ಬಂದಿದಿನೋ ಗೊತ್ತಾಗ್ಲಿಲ್ಲ. what an opportunity for us , to learn /grow from all angles , leadership qualities , how to speak, how to present, i can just tell it was a over all a personality development for us... Really i got motivated from each n every event.. how to express that now.. u have to come for next work shop in 2011 and experience that.
Thanks to IGNITE and ಸಂಪತ್ again, ಬ್ಲಾಗ್ ಅಂದ್ರೇನೆ ಏನು ಅನ್ನೋದು ಗೊತ್ತ್ತಿಲ್ಲದ ನಂಗೆ, ಇವತ್ತು ಬ್ಲಾಗ್ ಮಾಡಬೆಕಂದ್ರೆ Ignite ಕಾರಣ. ಇನ್ನೇನು ಬೇಕು ಪ್ರತೀ ಸರಿ IGNITE ಅಲ್ಲಿ ಭಾಗವಹಿಸಿ ಏನಾದರು ಹೊಸತನ್ನ ತಗೊಂಡು ಹೋಗಿ... ಅದಕ್ಕೆ ಸಾಕ್ಷಿ.. ಈ ಬ್ಲಾಗು :)
ಸಮಯದ ಅಭಾವದ ಕಾರಣ ಅರ್ಧ experience ಮಾತ್ರ ಬರೆದಿದ್ದೇನೆ, ಇನ್ನರ್ದ ಸದ್ಯದಲ್ಲಿ ಬರಲಿದೆ...
Manju, Channagide...!!!
ReplyDeleteWhen words come out from heart, you doesn't need to be an expert blogger, words just flow. Well written and hope it fetches more young minds to next workshop.
Manju,
ReplyDeletemodlu ninna session on scholarship was wonderful.. Eega, ee blog. Good man. Keep going. Waiting eagerly to know how you pull others in the next part. Surely, you must mention on those who did not turn up at least for Alumni Meet, if not for IGNITE.
All the best!
- Ravi Prakash
Manju,
ReplyDeleteIt has come out very good and portraits your experience very well. Except for Ravi (Prakash), Ravi (Nadig) and Jeevan I could not identify anybody in the photo by names. You people have done a wonderful job. Keep it up. Hopefully I can connect with this group sometime in future.
Keep blogging, it is wonderful way to express what you feel.
Best Wishes,
Prakash Urs (1986 batch)