ಬಾಲ್ಯ ಜೀವನದ ಅತ್ಯಂತ ಸುಮಧುರವಾದ ಸಮಯ, ಯಾರನ್ನೇ ಕೇಳಿದರೂ ಎಲ್ಲ ಹೇಳೋದು ನಾನು ಚಿಕ್ಕವನಿದ್ದಾಗ ಎಷ್ಟು ಚೆಂದ ಇತ್ತು ಯಾವುದೇ ಟೆನ್ಶನ್ ಇರಲಿಲ್ಲ , ನನ್ನ ಸ್ಕೂಲ್ ಲೈಫ್ ಸೂಪರ್ ಅಂತ . ನಾನಂತು ಇನ್ನು ಅದೃಷ್ಟಶಾಲಿ ಯಾಕಂದ್ರೆ ನನ್ನ ಅತ್ಯಮೂಲ್ಯ ಬಾಲ್ಯದ ದಿನಗಳನ್ನ ಕಳೆದದ್ದು ಮಲೆನಾಡ ಮಡಿಲಲ್ಲಿರುವ ಜವಾಹರ್ ನವೋದಯ ಶಾಲೆಯಲ್ಲಿ, ಕೆಲವರಿಗೆ ಯಾವುದೀ ನವೋದಯ ಅಂತ ಅನಿಸಬಹುದು , ನನ್ನ ಭಾಷೆಯಲ್ಲಿ ಹೇಳಬೇಕಂದ್ರೆ ಸ್ವರ್ಗ...! ಸ್ವಲ್ಪ ಜಾಸ್ತಿ ಆಯಿತು ಅಂತೀರಾ , ಸರಿ ಅರ್ಥ ಆಗೋ ಹಾಗೆ ಹೇಳ್ಬೇಕಂದ್ರೆ ಜವಾಹರ್ ನವೋದಯ ವಿಧ್ಯಾಲಯಗಳು (JNV) ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಪ್ರತಿಭಾನ್ವಿತ ಶಿಕ್ಷಣ ವ್ಯವಸ್ಥೆ.
1985 ರಲ್ಲಿ ಸ್ಥಾಪನೆಯಾದ JNV ವಸತಿ ಶಾಲೆಗಳು ಪಿವಿ ನರಸಿಂಹ ರಾವ್ ಮತ್ತು ರಾಜೀವ್ ಗಾಂಧಿ ಅವರ ಕನಸಿನ ಕೂಸು. ಭಾರತದ ಗ್ರಾಮೀಣ ಭಾಗಗಳಿಂದ ಪ್ರತಿಭಾವಂತ ಮಕ್ಕಳನ್ನು ಹುಡುಕುವುದು, ಪೊಷಿಸುವುದು ಮತ್ತು ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣ ನೀಡುವುದು ಇದರ ಮೊದಲ ಉದ್ದೇಶವಾಗಿತ್ತು. ಇದೀಗ ತಮಿಳುನಾಡು ಹೊರತುಪಡಿಸಿ, ದೇಶದ ಎಲ್ಲಾ ರಾಜ್ಯಗಳಲ್ಲೂ JNV ಶಾಲೆಗಳಿವೆ,. ಡಿಸೆಂಬರ್ 2010ರ ವರೆಗೆ ಸುಮಾರು 600 JNV ಗಳು ಸಕ್ರಿಯವಾಗಿ ವಿಧ್ಯಾಭ್ಯಾಸ ನೀಡುತ್ತಿವೆ .ಪ್ರತಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ CBSE ಪ್ರತಿ ವರ್ಷ ನಡೆಸುವ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ.6 ನೆ ತರಗತಿಯಿಂದ 12 ನೆ ತರಗತಿಯವರೆಗೆ ತ್ರಿಭಾಷ ಪಧ್ಧತಿಯಲ್ಲಿ ಶಿಕ್ಷಣ ನೀಡಲಾಗುವುದು.
ಹೋ...! ಅದ್ರಲ್ಲಿ ಏನಿದೆ ಸ್ಪೆಷಲ್ ನಿಮ್ಮುರಲ್ಲೂ ದೊಡ್ಡ ದೊಡ್ಡ ಸ್ಕೂಲು-ಕಾಲೇಜು ಇದೆ ಅಂತಿರ ??? JNV ಸ್ಪೆಷಲ್ ಏನಪ್ಪಾ ಅಂದ್ರೆ ಕ್ಲಾಸ್-VI ನೇ ರಿಂದ XII ಗೆ ಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು, ಅದರಲ್ಲೂ ಉತ್ತಮವಾದ CBSE ಮಾಧ್ಯಮದಲ್ಲಿ. ಇದಲ್ಲದೆ ಪಠ್ಯಕ್ರಮದ ಶಾಲೆಯ ಸಾಧಾರಣ ವಿಷಯಗಳ ಜೊತೆಗೆ ಸಂಗೀತ, ಆಟಗಳು, ಡ್ರಾಯಿಂಗ್, ಕಂಪ್ಯೂಟರ್, SUPW (ಸಾಮಾಜಿಕವಾಗಿ ಉಪಯುಕ್ತ ಉತ್ಪಾದಕ ಕೃತಿಗಳು) ಗಳನ್ನೂ ಕೂಡ ಕಲಿಸಲಾಗುತ್ತದೆ. ಇಲ್ಲಿ ವಿಧ್ಯಬ್ಯಾಸ ಮಾತ್ರ ಉಚಿತವಲ್ಲ ಜೊತೆಗೆ ವಸತಿ ಶಾಲೆಯಗಿರುವುದರಿಂದ ಊಟ, ಸಮವಸ್ತ್ರ, ಪಠ್ಯ ಪುಸ್ತಕಗಳು, ಸೋಪು, ಟೂತ್ ಪೇಸ್ಟ್, ಸ್ಟೇಷನರಿ,.....! ಎಲ್ಲವು ಉಚಿತ.
ಈ ಶಾಲೆಗಳು ಪ್ರತಿ ಮಗುವಿನ ಪರಿಣಾಮಕಾರಿ ವ್ಯಕ್ತಿತ್ವದ ಬೆಳವಣಿಗೆಗೆ ಕಾರಣವಾಗಿದೆ,JNV ಶಾಲೆಗಳ X ಮತ್ತು XII ಪರೀಕ್ಷೆಯಾ ಫಲಿತಾಂಶಗಳು ಒಟ್ಟಾರೆ CBSE ರಾಷ್ಟ್ರೀಯ ಸರಾಸರಿ ಪಾಸ್ ಶೇಕಡಾವಾರು ಕೇಂದ್ರೀಯ ವಿದ್ಯಾಲಯಗಳು ಮತ್ತು ಇತರ ಸ್ವತಂತ್ರ ಶಾಲೆಗಳಿಗೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಿದೆ.ಗ್ರಾಮೀಣ ಹಿನ್ನೆಲೆ ಹೊರತಾಗಿಯೂ ಈ ಶಾಲೆಗಳು ಯಶಸ್ಸನ್ನು ತೋರಿಸುತ್ತದೆ.ಅಧುನಿಕ ಶಿಕ್ಷಣದ ಜೊತೆಗೆ ವಿವಿಧ ಆಟ ಮತ್ತು ಕ್ರೀಡೆಗಳಲ್ಲಿ ಉತ್ತೇಜನ ನೀಡಲಾಗುತ್ತದೆ ಇದು ವಿಧ್ಯಾರ್ಥಿಗಳ ಧೈಹಿಕ ಮತ್ತು ಭೌತಿಕ ಕೌಶಲ್ಯ ಅಭಿವೃದ್ಧಿಯಾಗಲ್ ಸಹಾಯವಾಗುತ್ತದೆ, ಕ್ರೀಡೆಗಳಲ್ಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಲು ಪ್ರತಿ ವರ್ಷ ಕ್ಲಸ್ಟರ್ ಮತ್ತು ಪ್ರಾದೇಶಿಕ ಮಟ್ಟದ ಸ್ಪೋರ್ಟ್ಸ್ ಮೀಟ್ಸ್ ನಡೆಸಲಾಗುತ್ತದೆ . ಜೊತೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗು NCC ಮೂಲಕ ವಿವಿಧ ಕ್ಯಾಂಪ್ ಹಾಗು ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಬಹುದು. ಇದುವರೆಗೂ ಅಂದಾಜಿನಲ್ಲಿ 2 ಲಕ್ಹ್ಶ ವಿಧ್ಯಾರ್ಥಿಗಳು ನವೋದಯದ ಸೌಲಭ್ಯಗಳನ್ನ ಪಡೆದುಕೊಂಡಿದ್ದಾರೆ.
ಬೆಳಗ್ಗೆ 5.30 ಕ್ಕೆ ಶುರುವಾಗುವ ಜೋಗಿಂಗ್ ನಿಂದ ದಿನಚರಿ ಶುರು, ದಿನದ ವ್ಯಾಯಾಮದ ನಂತರ ರೆಡಿ ಆಗಲು ಸ್ವಲ್ಪ ಟೈಮು ನಂತರ ಹಾಲು ಕುಡಿದು ಪ್ರಯೇರ್ ಮುಗಿಸಿ ಕ್ಲಾಸ್ ಸ್ಟಾರ್ಟ್ ಮಾಡಿದರೆ ಮಧ್ಯಾಹ್ನ 1 ರ ವರೆಗೂ ಬೇರೆ ಬೇರೆ ಕ್ಲಾಸ್ಗಳು, ಮಧ್ಯಾಹ್ನದ ಊಟದ ನಂತರ 3 ರಿಂದ 4.30 ರ ವರೆಗೆ ಸೈಲೆಂಟ್ ರೀಡಿಂಗ್ ಈ ಸಮಯದಲ್ಲಿ ಓದುವುದು, ಹೋಂ ವರ್ಕ್ ಮಾಡುವುದು. 4.30 ಇಂದ ಟೀ/ಕಾಫಿ ಕುಡಿದು ಆಟ/ಗೇಮ್ಸ್ ಸ್ಟಾರ್ಟ್. ಇಲ್ಲಿ ಎಲ್ಲ ರೀತಿಯ ಆಟೋಟಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಆಟ ಮುಗಿಸಿ ಮತ್ತೆ ರಾತ್ರಿ ಮತ್ತೆ ಊಟದ ಸಮಯದ ವರೆಗೆ ಮತ್ತೆ ಓದುವುದು. ರಾತ್ರಿ ಮತ್ತೆ ಬಿಸಿ ಬಿಸಿ ಊಟ ಮುಗಿಸಿ ಮತ್ತೆ ಓದುವುದಾದ್ರೆ ಓದಬಹುದು ಇಲ್ಲದಿದ್ದಲ್ಲಿ ಮಲಗುವುದು.ಇಲ್ಲಿಗೆ ದಿನಚರಿ ಮುಗಿಯತ್ತದೆ. ಈ ರೀತಿಯ ಸೌಲಭ್ಯಗಳು ಬೇರೆ ಯಾವ ಶಾಲೆಯಲ್ಲೂ ನಿಮಗೆ ದೊರೆಯುವುದಿಲ್ಲ. ಈ ಎಲ್ಲ ಸೌಲಭ್ಯಗಳೇ ಮಕ್ಕಳನ್ನ ಸ್ಟ್ರಾಂಗ್ ಮಾಡುವುದು.
2011 ಕ್ಕೆ ಜವಾಹರ್ ನವೋದಯ ವಿಧ್ಯಾಲಯ, ಬಾಳೆಹೊನ್ನೂರು ಯಶಸ್ವಿಯಾಗಿ 25 ವರ್ಷಗಳನ್ನ ಮುಗಿಸಿದೆ, ಚಿಕ್ಕಮಗಳೂರು ಜಿಲ್ಲೆಯ ಸಾವಿರಾರು ಬಡ ಹಾಗು ಗ್ರಾಮೀಣ ಪ್ರಾದೆಶದಿಂದ ಬಂದಂಥಹ ಮಕ್ಕಳಿಗೆ ವಿಧ್ಯಾಭ್ಯಾಸ ನೀಡಿದೆ, ಇವತ್ತು ಇಲ್ಲಿ ಓದಿದಂತಹ ಹಲವು ವಿಧ್ಯಾರ್ಥಿಗಳು ಪ್ರಪಂಚದದ್ಯಂತ ಹರಡಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಈ ಪ್ರಯುಕ್ತ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಡಿಸೆಂಬರ್ 3 ಹಾಗು 4 ಕ್ಕೆ ಬೆಳ್ಳಿ ಹಬ್ಬವನ್ನ ಆಚರಿಸಲಾಗುತ್ತಿದೆ, ಈ ಕಾರ್ಯಕ್ರಮಕ್ಕೆ ಎಲ್ಲ ಹಳೆಯ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಮತ್ತವರ ಪೋಷಕರು ಕೂಡ ಬಾಗವಹಿಸಲಿದ್ದಾರೆ. ಈ ಮೂಲಕ ಎಲ್ಲ ಹಳೆಯ ವಿದ್ಯಾರ್ಥಿಗಳಿಗೆ ಆಹ್ವಾನಿಸಲಾಗುತ್ತಿದೆ.
No comments:
Post a Comment